ಐ ಲವ್ ಯು ಕುರ್ಕುರೆ ಅಂತಾನೆ ಪ್ರಣಾಬಿಟ್ಟ ಬಾಲಕ

ಪಶ್ಚಿಮ ಬಂಗಾಳದ ಪಶ್ಚಿಮ ಮೇದನಿಪುರ ಜಿಲ್ಲೆಯ ಪನ್ ಸ್ಕೂರಾದಲ್ಲಿ ಸಂಜೆ ನಡೆದಿದೆ.

ಅಮ್ಮ ನಾನು ಚಿಪ್ಸ್ ಕದ್ದಿಲ್ಲ ನಾನು ಕಳ್ಳ ಅಲ್ಲ ಎಂದು ಡೆತ್ ನೋಟ್ ಬರೆದಿಟ್ಟ 12 ವರ್ಷದ ಶಾಲಾ ಬಾಲಕನೊಬ್ಬ ಕ್ರಿಮಿ ನಾಶಕ ಕುಡಿದು ಆತ್ಮಹತ್ಯೆಗೆ ಶರಣಾದ ಹೃದಯ ನಿದ್ರಾವಕ ಘಟನೆ.

ಆ ಬಾಲಕ ಮನೆಯ ಸಮೀಪದಲ್ಲಿರುವ ಅಂಗಡಿಗೆ ಕುರ್ಕುರೆ ತರಲು ಹೋಗಿದ್ದಾನೆ,ಅಂಗಡಿ ಬಳಿ ನಿಂತು ಮಾಲೀಕರನ್ನು ಕರೆದಿದ್ದಾನೆ ಎಷ್ಟು ಹೊತ್ತು ಆದರೂ ಯಾರು ಬರದ ಕಾರಣ ವಾಪಸ್ ಆಗಿದ್ದಾನೆ,ಅಲ್ಲಿ ಮುಂದೆ ಕೆಳಗೆ ಬಿದ್ದ ಕುರ್ಕುರೆ ಪ್ಯಾಕೆಟ್ ತಗೊಂಡಿದ್ದಾನೆ ಅಷ್ಟರಲ್ಲೇ ಅಲ್ಲಿಗೆ ಬಂದ ಮಾಲೀಕ ನೋಡಿ ನೀನು ಕಳ್ಳ ಅಂಗಡಿಯಿಂದ ಕಳ್ಳತನ ಮಾಡಿದ್ದೀಯಾ ಎಂದು ಬೈದು ಸಾರ್ವಜನಿಕವಾಗಿ ಅವನಿಗೆ ಬಸ್ಕಿ ಹೊಡೆಯುವಂತೆ ಹೇಳಿ ಕೆನ್ನೆಗೆ ಹೊಡೆದಿದ್ದಾನೆ.

ಆ ಬಾಲಕನ ಮನ ನೊಂದು ತನ್ನ ಪೋಷಕರ ಜೊತೆ ಮನೆಗೆ ಹೋಗಿದ್ದಾನೆ ಕೊನೆಯದಾಗಿ ತನಗೆ ಆದ ಅವಮಾನ ನೋವನ್ನು ಡೆತ್ ನೋಟ್ ಬರೆದು ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ತನ್ನ ಕೊಠಡಿಗೆ ಹೋಗಿ ಚಿಲಕ ಹಾಕಿಕೊಂಡಿದ್ದ ಬಹಳ ಹೊತ್ತಾದರೂ ಹೊರಗೆ ಭಾರದಿದ್ದರಿಂದ ಗಾಬರಿಗೊಂಡ ಕುಟುಂಬ ಸದಸ್ಯರು ನೆರೆಹೊರೆಯವರ ನೆರವಿನಿಂದ ಬಾಗಿಲು ಹೊಡೆದಾಗ ಕ್ರಿಮಿನಾಶಕ ಸೇವಿಸಿದ್ದು ಕಂಡುಬಂದು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರು ಪ್ರಯೋಜನವಾಗಲಿಲ್ಲ.

ಆ ಬಾಲಕನ ಡೆತ್ ನೋಟ್ ಅಲ್ಲಿ ಅಂಕಲ್ ಸುಳ್ಳು ಹೇಳುತ್ತಿದ್ದಾರೆ , ನಾನು ಕದ್ದಿಲ್ಲ ಅಮ್ಮ ಬೀದಿ ಬಳಿ ಬಿದ್ದಿದ್ದನ್ನು ಎತ್ತಿಕೊಂಡು ಬಂದೆ ” ಐ ಲವ್ ಯು ಕುರ್ಕುರೆ “ಎಂದು ಬರೆದಿದ್ದಾನೆ.

ನಿಜಕ್ಕೂ ಹೃದಯವಿದ್ರಾವಕ ಘಟನೆ